ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು

ಪರಶುರಾಮ ಸೃಷ್ಠಿಯ ಸಪ್ತಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರು

ಶ್ರೀ ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಪ್ರಖ್ಯಾತ ದೇವಾಲಯಗಳಲ್ಲೊಂದು.

ಕೊಡಚದ್ರಿ ಪರ್ವತದ ತಪ್ಪಲಿನಲ್ಲಿ ದಟ್ಟವಾದ ಕಾನನದ ನಡುವಿನ ಪುಟ್ಟ ಗ್ರಾಮ ಕೊಲ್ಲೂರಿನಲ್ಲಿ ಶ್ರೀ
ಮೂಕಾಂಬಿಕಾ ತಾಯಿ ನೆಲೆಸಿದ್ದಾರೆ. ದುಷ್ಟ ಶಿಕ್ಷಿಣಿ, ಶಿಷ್ಟ ರಕ್ಷಿಣಿಯಾಗಿ ಅವತಾರವೆತ್ತಿರುವ ಶಕ್ತಿ ದೇವತೆ ಶ್ರೀ ಮೂಕಾಂಬಿಕಾ
ತಾಯಿಯು ಸಹಸ್ರ ಸಹಸ್ರ ಭಕ್ತ ಸಮೂಹವನ್ನು ಪೊರೆಯುತ್ತಿರುವ ಜಗನ್ಮಾತೆ.