ಕೊಲ್ಲೂರು ಶ್ರೀ ಸದ್ಗುರು ನಿತ್ಯಾನಂದ ಆಶ್ರಮಕ್ಕೆ ಸ್ವಾಗತ

ಆಶ್ರಮ, ಸದ್ಗುರು ಹಾಗೂ ಸ್ವಾಮೀಜಿ

ಕೊಲ್ಲೂರಿನಲ್ಲಿ ಶ್ರೀ ಸದ್ಗುರು ನಿತ್ಯಾನಂದರ ದಿವ್ಯ ಸಾನಿಧ್ಯ.

ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ಕೊಲ್ಲೂರು
ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ಕೊಲ್ಲೂರು

1960ರಲ್ಲಿ ಶ್ರೀ ಸದ್ಗುರು ನಿತ್ಯಾನಂದರ ಅಣತಿಯಂತೆ ಕೊಲ್ಲೂರಿಗೆ ಬಂದ ಶ್ರೀ ವಿಮಲಾನಂದ ಸ್ವಾಮೀಜಿಯವರು ಕುಟೀರವನ್ನು ಕಟ್ಟಿ ವಾಸಿಸುತ್ತಿದ್ದರು. ಅದು ಇಂದು ಶಿಲಾಮಯಗೊಂಡಿದೆ. ಸದ್ಗುರುವಿನ ಸೇವಾ ಕೈಂಕರ್ಯವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ.

ಶ್ರೀ ಸದ್ಗುರು ನಿತ್ಯಾನಂದರು
ಶ್ರೀ ಸದ್ಗುರು ನಿತ್ಯಾನಂದರು

ಶ್ರೀ ಸದ್ಗುರು ನಿತ್ಯಾನಂದರು ಸಹಸ್ರಾರು ಪವಾಡ, ಲೀಲೆಗಳನ್ನು ಮಾಡಿ ಭಕ್ತರನೇಕರನ್ನು ಉದ್ಧರಿಸಿದ ಮತ್ತು ಕೈಗೊಂಡ ಮಾನವತಾ ಸೇವೆಗಳು ಅನೇಕಾನೇಕ. ಶ್ರೀ ನಿತ್ಯಾನಂದರು ಉಡುಪಿ, ಕೊಲ್ಲೂರಿನಲ್ಲಿಯೂ 1920-30ರ ದಶಕದಲ್ಲಿ ಕೊನೆಯಲ್ಲಿ ತಂಗಿದ್ದರು.

ಶ್ರೀ ವಿಮಲಾನಂದ ಸ್ವಾಮೀಜಿ
ಶ್ರೀ ವಿಮಲಾನಂದ ಸ್ವಾಮೀಜಿ

ಶ್ರೀ ಸದ್ಗುರು ನಿತ್ಯಾನಂದರ ನೇರ ಶಿಷ್ಯರಾದ ಶ್ರೀ ವಿಮಲಾನಂದ ಸ್ವಾಮೀಜಿಯವರು ಕೊಲ್ಲೂರು ಶ್ರೀ ಸದ್ಗುರು ನಿತ್ಯಾನಂದ ಮಠದ ಸಂಸ್ಥಾಪಕರು. ಶ್ರೀ ನಿತ್ಯಾನಂದರ ಲೋಕ ಕಲ್ಯಾಣದ ಸಂದೇಶವನ್ನು ಪಾಲಿಸುತ್ತಾ, ಸೇವಾ ಕಾರ್ಯವನ್ನು ಮುಂದುವರಿಸಿಕೊಂಡು ಬಂದವರು.

ಶ್ರೀ ಸದ್ಗುರು ನಿತ್ಯಾನಂದ ಆಶ್ರಮವು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸನೀಹದಲ್ಲಿದೆ. ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವೂ ಒಂದಾಗಿದೆ.

ashram-opti

ಶ್ರೀ ವಿಮಲಾನಂದ ಸ್ವಾಮೀಜಿಯವರು ಕೊಲ್ಲೂರು ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ಸಂಸ್ಥಾಪಕರು.

ಶ್ರೀ ವಿಮಲಾನಂದ ಸ್ವಾಮೀಜಿಯವರು ಸದ್ಗುರು ನಿತ್ಯಾನಂದ ಗುರುದೇವರ ಪುಣ್ಯತಿಥಿಯನ್ನು ಎಂದೂ ಆಚರಿಸಿಲ್ಲ. ನನ್ನ ಗುರುದೇವರು ಸಮಾಧಿ ಆಗಲಿಲ್ಲ, ನನಗೆ ಅವರು ಇನ್ನೂ ಮೊದಲಿನ ಹಾಗೆ ಇದ್ದಾರೆ ಎಂದೇ ಹೇಳುತ್ತಿದ್ದರು.

ಶ್ರೀ ನಿತ್ಯಾನಂದ ಗುರುದೇವರು ಜಾತಿ, ಮತ, ಪಂಗಡಗಳ ಸುಳಿಯಲ್ಲಿ ಸಿಲುಕದೇ ಎಲ್ಲರೂ ಒಂದೇ, ಎಲ್ಲರೂ ಸಮಾನರು ಎಂದು ಲೋಕಕ್ಕೆ ಸಾರಿದವರು.

ಆಶ್ರಮದಲ್ಲಿ ಪ್ರತಿ ವರ್ಷವೂ ಎಪ್ರಿಲ್ ತಿಂಗಳ ಚೈತ್ರ ಪೂರ್ಣಮಿಯಂದು ವಾರ್ಷಿಕೋತ್ಸವ, ಅನ್ನದಾನ ನಡೆಯುತ್ತದೆ. ಪ್ರತಿದಿನ ತ್ರಿಕಾಲ ಪೂಜೆ, ಪಾದುಕ ಅಭಿಷೇಕ ನಡೆಯುತ್ತಿದೆ. ಅತಿಥಿಯಾಗಿ ಬರುವ ಸಾಧು-ಸಂತರಿಗೆ ಭೋಜನ ವ್ಯವಸ್ಥೆಯನ್ನೂ, ಉಳಿಯಲು ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.

ಶ್ರೀ ಸದ್ಗುರು ನಿತ್ಯಾನಂದ ನಾಗರಾಜ ಟ್ರಸ್ಟ್ ಮೂಲಕ ಮುಂದಿನ ದಿನಗಳಲ್ಲಿ ಬಾಲಭೋಜನ ಗೃಹ ಹಾಗೂ ಆಶ್ರಮಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಉಳಿದುಕೊಳ್ಳಲು ವಸತಿಗೃಹ ನಿರ್ಮಿಸುವ ಯೋಜನೆ ಇದೆ.