ಪರಮಪೂಜ್ಯ ಶ್ರೀ ವಿಮಲಾನಂದ ಸ್ವಾಮೀಜಿ

ಸದ್ಗುರು ಶ್ರೀ ನಿತ್ಯಾನಂದರ ನೇರ ಶಿಷ್ಯರಾದ, ಪರಮಪೂಜ್ಯ ಶ್ರೀ ವಿಮಲಾನಂದ ಸ್ವಾಮೀಜಿಯವರು ಕೊಲ್ಲೂರು ಶ್ರೀ ಸದ್ಗುರು ನಿತ್ಯಾನಂದ ಮಠದ ಸಂಸ್ಥಾಪಕರು. ಪವಾಡ ಪುರುಷ ಶ್ರೀ ನಿತ್ಯಾನಂದರ ಲೋಕ ಕಲ್ಯಾಣದ ಸಂದೇಶವನ್ನು ಪಾಲಿಸುತ್ತಾ, ಕೊಲ್ಲೂರು ಪರಿಸರದಲ್ಲಿ ಸೇವಾ ಕಾರ್ಯವನ್ನು ಮುಂದುವರಿಸಿಕೊಂಡು ಬಂದವರು.

ಪೂಜ್ಯ ಶ್ರೀ ವಿಮಲಾನಂದರು; ಶ್ರೀ ನಿತ್ಯಾನಂದ ಗುರುದೇವರ ದರ್ಶನಾಕಾಂಕ್ಷಿಯಾಗಿ ಪೂವಾಶ್ರಮದ ಹಿರಿಯರೊಂದಿಗೆ ಕರ್ನಾಟಕದ ತುಳುನಾಡಿನಿಂದ ಗಣೇಶಪುರಿಗೆ ತೆರಳಿದ್ದರು. ಪ್ರಥಮ ಭಾರಿಗೆ ಶ್ರಿ ವಿಮಲಾನಂದರು, ಗಣೇಶಪುರಿಯಲ್ಲಿ ಸದ್ಗುರು ನಿತ್ಯಾನಂದರು ವಾಸಿಸುವ ಕೋಣೆಯನ್ನು ಪ್ರವೇಶಿಸುವಾಗ ಇಡಿ ಕೋಣೆ ಹಳದಿ ಬಣ್ಣಕ್ಕೆ ತಿರುಗಿತ್ತು, ನಡುವೆ ಶ್ರೀ ಗುರುದೇವರು ನಾಲ್ಕು ಕೈಯುಳ್ಳವರಾಗಿ, ಕಿರೀಟಧಾರಿಯಾಗಿ, ಸಾಕ್ಷಾತ್ ಮಹಾ ವಿಷ್ಣುವಿನ ರೂಪದಲ್ಲಿ ದರ್ಶನ ನೀಡಿದರು. ಅಚಾನಾಕಾಗಿ ನಡೆದ ಘಟನೆಯನ್ನು ವಿಮಲಾನಂದರಿಗೆ ಊಹಿಸಿಕೊಳ್ಳಲಾಗಲಿಲ್ಲ. ಕ್ಷಣಕಾಲ ವಿಚಲಿತರಾಗಿ ಧೀರ್ಘದಂಡ ನಮಸ್ಕಾರ ಮಾಡಿದರು. ಮರುಕ್ಷಣವೇ ಸತ್ಕಾರದ ಧ್ವನಿಯೊಂದು ವಿಮಲಾನಂದರಿಗೆ ಕೇಳಿತು. ’ಹೂಂಏಳುಊಟ ಆಯಿತೇ….? ಎಂಬ ಮಾತು ಕೇಳಿ ತಲೆಯೆತ್ತಿ ನೋಡಿದಾಗ ಅಲ್ಲಿನ ಚಿತ್ರಣ ಬದಲಾಗಿತ್ತು. ಸದ್ಗುರು ನಿತ್ಯಾನಂದರು ಕೇವಲ ಲಂಗೋಟಿಯಲ್ಲಿ ನಗುತ್ತಾ ಮಲಗಿದ್ದರು. ಬಳಿಕ ಕುಳಿತುಕೊಂಡ ಅವರು ವಿಮಲಾನಂದ ಸ್ವಾಮೀಜಿಯವರನ್ನು ನೋಡಿ ಗೋಡೆಯಲ್ಲಿ ತನ್ನ ಕೈ ಬೆರಳಿನ ಉಗುರಿನಲ್ಲಿ + (ಫ್ಲಸ್ ಮಾರ್ಕ್) ಬರೆದು ಅವರಷ್ಟಕ್ಕೇ ಸ್ಮರಣೆಗೈದರು. ಕ್ಷಣದಿಂದ ಶ್ರೀ ವಿಮಲಾನಂದರ ಮನವು ಸಂಪೂರ್ಣ ಪರಿವರ್ತನೆಯಾಗಿ ತನ್ನ ನರನಾಡಿಗಳೆಲ್ಲಾ ಗುರುದೇವರೇ ತುಂಬಿಕೊಂಡಂತಾಯಿತು.

ಮಂದೆ ವಿಮಲಾನಂದರು ಸದ್ಗುರು ನಿತ್ಯಾನಂದರ ಶಿಷ್ಯರಾಗಿ ಸೇವೆಸಲ್ಲಿಸತ್ತಿದ್ದರು. ಹೀಗೆಯೇ ಕೆಲವು ತಿಂಗಳಾದ ಮೇಲೆ ಒಂದು ದಿನ ಶ್ರೀ ಗುರುದೇವರು ಕೈಲಾಸ ಆಶ್ರಮದಲ್ಲಿದ್ದಾಗ ಹೂಂ…. ವೈಕುಂಠ ಆಶ್ರಮದಲ್ಲಿ ಸೇವೆ ಮಾಡಿಕೊಂಡಿರು ಎಂದು ಆಜ್ಞಾಪಿಸಿದರು. (ವೈಕುಂಠ ಆಶ್ರಮವೆಂದರೆ ಈಗಿನ ಸಮಾಧಿ ಮಂದಿರವು ಮೊದಲು ವೈಕುಂಠ ಆಶ್ರಮವೆಂದು ಕರೆಯಲ್ಪಡುತ್ತಿತ್ತು. ಅಲ್ಲಿ ಕೆಲವು ಕಾಲ ಶ್ರೀ ಗುರುದೇವರು ವಾಸವಾಗಿದ್ದರು. ಆಮೇಲೆ ಕೈಲಾಸ ಆಶ್ರಮಕ್ಕೆ ಬಂದು ನೆಲೆಸಲು ಪ್ರಾರಂಭಿಸಿದ್ದರು.) ಶ್ರೀ ಮಿಮಲಾನಂದರು, ಶ್ರೀ ಗುರುದೇವರ ಆಜ್ಞೆಯಂತೆ ವರ್ಷಗಳ ಕಾಲ ಶ್ರೀ ಗುರುದೇವರ ಸಾನಿಧ್ಯದಲ್ಲಿ ವೈಕುಂಠ ಆಶ್ರಮದ ಸೇವೆ ಮಾಡಿಕೊಂಡಿದ್ದರು. ಸಂದರ್ಭ ಶ್ರೀ ಗುರುದೇವರ ಅಸಂಖ್ಯಾತ ಮಹಿಮೆಗಳನ್ನು ಕಣ್ಣಾರೆ ಕಂಡಿದ್ದಾರೆ. ಹಲವಾರು ಬಾರಿ ಅವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ನಂತರ ಒಮ್ಮೆ ಕಾಶಿಗೆ ಹೋಗಲು, ಆಮೇಲೆ ಒಂದು ವರ್ಷ ನಾಸಿಕ್ತಪೋವನಕ್ಕೆ ಹೋಗಿರಲು ಮತ್ತು ಒಂದು ವರ್ಷ ಕಾಂಙಂಗಾಡಿಗೆ ಹೋಗಿರಲು ವಿಮಲಾನಂದರಿಗೆ ಆಜ್ಞಾಪಿಸಿದರು.

ಸದ್ಗುರು ನಿತ್ಯಾನಂದರ ಆಜ್ಞೆಯಂತೆ ವಿವಿಧ ಆಶ್ರಮಗಳಲ್ಲಿ ಇದ್ದು ಸೇವೆ ಸಲ್ಲಿಸಿ ಮರಳಿ  ಗಣೇಶಪುರಿಗೆ ವಿಮಲಾನಂದರು ತೆರಳಿದರು. ಶಿಷ್ಯ ಶ್ರೀ ವಿಮಲಾನಂದರ ಕಾರ್ಯಸಿದ್ಧಿ ಕೌಶಲ್ಯ ಹಾಗೂ ಸೇವಾಗುಣವನ್ನು ಅರಿತು ಅವರಿಗೆ ಸಂನ್ಯಾಸ ದೀಕ್ಷೆಯನ್ನು ನೀಡುವ ನಿರ್ಣಯಕ್ಕೆ ಶ್ರೀ ನಿತ್ಯಾನಂದರು ಬಂದಿದ್ದರು. ವಿಮಲಾನಂದರು ಗಣೇಶಪುರಿಗೆ ಮರಳುತ್ತಿದ್ದಂತೆ ಕುಂಡದಲ್ಲಿ ಸ್ನಾನ ಮಾಡಿ ಬರುವಂತೆ ಆಜ್ಞಾಪಿಸಿದರು. ಸ್ನಾನ ಮಾಡಿ ಶ್ರೀ ನಿತ್ಯಾನಂದರ ಎದುರು ಹೋಗಿ ನಿಂತಾಗ ಹೂಂಸಂನ್ಯಾಸಿ….ಸಂನ್ಯಾಸಿ….ಸಂನ್ಯಾಸಿ ಎಂದು ಮೂರು ಸಲ ಹೇಳಿ, ಸಂನ್ಯಾಸ ದೀಕ್ಷೆಯನ್ನಿತ್ತರು. ಬಳಿಕ ಹೋಗು ಕೊಲ್ಲೂರಿಗೆ, ಶರೀರ ಮೂರು ವರ್ಷ ಅಲ್ಲಿತ್ತು ಹೂಂಹೋಗು ಎಂದು ಅಜ್ಞಾಪಿಸಿದರು. ಶ್ರೀ ವಿಮಲಾನಂದರು ಅಲ್ಲಿಂದ ಹೊರಡುವ ಮೊದಲು ತಂದೆಯು ಮಗನನ್ನು ಕೇಳಿದಂತೆ ನಿನಗೇನು ಬೇಕು ಎಂದು ಶ್ರೀ ನಿತ್ಯಾನಂದರು ಕೇಳಿದಾಗ ನನಗೆ ನೀವು ಬೇಕು ಗುರುದೇವಾ ಎಂದು ಬೇಡಿಕೊಂಡರು. ವಿಮಲಾನಂದರ ಉತ್ತರದಿಂದ ಆಶ್ಚರ್ಯಪ್ರಶ್ನಾರ್ಥಕಸಂತೋಷ ಮುಖ ಬಾವದೊಂದಿಗೆ ಹುಸಿ ಕೋಪವನ್ನು ನಟಿಸುತ್ತಾ,-ಹೂಂ…..ಹೋಗು  ಎಂದು ಹರಿಸಿದರು. ಕೊಲ್ಲೂರಿಗೆ ಕಳಿಸುವ ಮೊದಲು ಶ್ರೀ ಗುರುದೇವರು ತಾನು ಕುಳಿತಿದ್ದ ಹಾಸಿಗೆಯಲ್ಲಿನ ಒಂದು ಕಂಬಳಿಯನ್ನು ತಾನು ಕೂತಿದ್ದ ಹಾಗೆಯೇ ಎಳೆದೂ….ಎಳೆದೂ.. ತೆಗೆದು ಪ್ರಸಾದ ರೂಪವಾಗಿ ಕೊಟ್ಟು ಹರಿಸಿದರು.

ಕೊಲ್ಲೂರಿನಲ್ಲಿ ಶ್ರೀ ಗುರುದೇವರು ಕೆಲಕಾಲ ತಂಗಿದ್ದರು ಎಂಬುದನ್ನು ಅಂದು ಶ್ರೀ ಮೂಕಾಂಬಿಕಾ ದೇವಳದ ಶ್ರೀ ವೀರಭದ್ರ ದೇವಸ್ಥಾನದ ಅರ್ಚಕರಾದ ಮಂಜುನಾಥ ಭಟ್ಟರು ಸಾಕ್ಷೀಕರಿಸಿದ್ದರು. ನಿತ್ಯಾನಂದರನ್ನು ನಾನು ಕೊಲ್ಲೂರಿನಲ್ಲಿ ನೋಡಿದ್ದೇನೆ. ಅವರು ಸಣ್ಣ ಪ್ರಾಯದವರಾಗಿದ್ದು, ಬರೀ ಲಂಗೋಟಿಯಲ್ಲಿದ್ದರು. ಮಧ್ಯಾಹ್ನ ಕಡು ಉರಿ ಬಿಸಿಲಿನಲ್ಲಿ ಸೌಪರ್ಣಿಕಾ ನದಿಯಲ್ಲಿರುವ ಬಿಸಿಯಾದ ಬಂಡೆಯ ಮೇಲೆ ಬರೀ ಮೈಯಲ್ಲಿ ಮಲಗಿರುವುದನ್ನು ಮತ್ತು ದೇವಸ್ಥಾನದ ಎದುರಿನ ಒಂದು ಮರದ ಬುಡದಲ್ಲಿ ಕುಳಿತಿರುವುದನ್ನು ನಾನು ನೋಡಿದ್ದೇನೆ ಎಂದು ಅವರು ಶ್ರೀ ವಿಮಲಾನಂದ ಸ್ವಾಮೀಜಿಯವರ ಬಳಿ ಹೇಳಿಕೊಂಡಿದ್ದರು.

ಶ್ರೀ ಗುರುದೇವರ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ್ದ ಶ್ರೀ ವಿಮಲಾನಂದ ಸ್ವಾಮೀಜಿಯವರು, ೧೯೬೦ರಲ್ಲಿ ಕೊಲ್ಲೂರಿಗೆ ಬಂದು ಕುಟೀರವನ್ನು ಕಟ್ಟಿ ವಾಸಿಸುತ್ತಿದ್ದರು. ಅದೇ ಕುಟೀರವು ಇಂದು ಶ್ರೀ ಗುರುದೇವತಾನುಗ್ರಹದಿಂದ ಹಾಗೂ ಭಕ್ತಾಧಿಗಳ ಸಹಕಾರದಿಂದ ಶಿಲಾಮಯ ದೇವಾಲಯವಾಗಿ ಮಾರ್ಪಟ್ಟಿದ್ದೆ. ಶ್ರೀ ಗುರುದೇವರ ವಿಗ್ರಹ ಪಂಚಲೋಹದಿಂದ ನಿರ್ಮಿಸಲಾಗಿದೆ. ಇಲ್ಲಿ ಪ್ರತಿ ವರ್ಷವೂ ಎಪ್ರಿಲ್ ತಿಂಗಳ ಚೈತ್ರ ಪೂರ್ಣಮಿಯಂದು ವಾರ್ಷಿಕೋತ್ಸವ, ಅನ್ನದಾನ ನಡೆಯುತ್ತದೆ. ಪ್ರತಿದಿನ ತ್ರಿಕಾಲ ಪೂಜೆ, ಪಾದುಕ ಅಭಿಷೇಕ ನಡೆಯುತ್ತಿದೆ. ಅತಿಥಿಯಾಗಿ ಬರುವ ಸಾಧುಸಂತರಿಗೆ ಭೋಜನ ವ್ಯವಸ್ಥೆಯನ್ನೂ, ಉಳಿಯಲು ವ್ಯವಸ್ಥೆಯನ್ನೂ ಮಾಡಿ ಕೈಲಾದ ಸಹಾಯ ಮಾಡಲಾಗುತ್ತಿದೆ.

ಶ್ರೀ ವಿಮಲಾನಂದ ಸ್ವಾಮೀಜಿಯವರು ಶ್ರೀ ನಿತ್ಯಾನಂದ ಗುರುದೆವರ ಪುಣ್ಯತಿಥಿ ಯನ್ನು ಎಂದೂ ಆಚರಿಸುವುದಿಲ್ಲ. ನನ್ನ ಗುರುದೇವರು ಸಮಾಧಿ ಆಗಲಿಲ್ಲ, ನನಗೆ ಅವರು ಇನ್ನೂ ಮೊದಲಿನ ಹಾಗೆ ಇದ್ದಾರೆ. ಆದುದರಿಂದ ನಾನು ಪುಣ್ಯತಿಥಿ ಆಚರಿಸುವುದಿಲ್ಲಎಂದು ಹೇಳುತ್ತಾರೆ. ಶ್ರೀ ವಿಮಲಾನಂದ ಸ್ವಾಮೀಜಿಯವರು  ಶ್ರೀ ನಿತ್ಯಾನಂದರ ನೇರ ಶಿಷ್ಯರಾಗಿದ್ದರೂ ಎಂದು ಹೇಳಿಕೊಂಡವರಲ್ಲ

ಶ್ರೀ ನಿತ್ಯಾನಂದ ಗುರುದೇವರು ಯಾವುದೆ ಜಾತಿ, ಮತ, ಪಂಗಡಗಳಿಗೆ ಸೇರಿದವರಲ್ಲ. ಎಲ್ಲರೂ ಒಂದೇ, ಎಲ್ಲರೂ ಸಮಾನರು ಎಂದು ಲೋಕಕ್ಕೆ ಸಾರಿದವರು. ಆದುದರಿಂದ ಮಠದಲ್ಲಿ ಯಾವುದೇ ಜಾತಿ, ಧರ್ಮ, ಮತ, ಪಂಗಡಗಳ ಭೇದವಿರುವುದಿಲ್ಲ. ಶ್ರೀ ಗುರುದೇವರನ್ನು ಎಲ್ಲಾ ಜಾತಿಮತದವರು ಭಕ್ತಿ ಶೃದ್ಧೆಯಿಂದ ಆರಾಧಿಸುತ್ತಾರೆ.

ಶ್ರೀ ಗುರುದೇವರ ನೇರ ಶಿಷ್ಯರಲ್ಲಿ ಓರ್ವರಾಗಿದ್ದ ಶ್ರೀ ವಿಮಲಾನಂದ ಸ್ವಾಮೀಜಿಯವರು 02 ಜೂನ್ 2014 ರಂದು ಮಧ್ಯಾಹ್ನ 12:30ಕ್ಕೆ ಶ್ರೀ ಗುರುದೇವರ ಮಹಾ ಮಂಗಳಾರತಿ ಆಗುತ್ತಿರುವಾಗಲೇ ಬ್ರಹ್ಮೈಕ್ಯರಾದರು. ಸಮಾಧಿ ಆಗುವ ಮೊದಲು ತನ್ನ ಹತ್ತಿರವಿದ್ದ ಎಲ್ಲಾ ಭಕ್ತರಿಗೂ ತಾನು ದೇಹ ಬಿಡುವ ಮುನ್ಸೂಚನೆಯನ್ನು ಕೊಟ್ಟಿದ್ದರು. ಶ್ರೀ ವಿಮಲಾನಂದರ ಸಮಾಧಿಯನ್ನೂ ಕೊಲ್ಲೂರಿನ ಶ್ರೀ ಗುರುದೇವರ ಮಠದ ಪಕ್ಕದಲ್ಲಿಯೇ ಮಾಡಲಾಗಿದೆ.

(ಸಮಾಧಿಯು ಶ್ರೀ ಮೂಕಾಂಬಿಕಾ ದೇವಸ್ಥಾನದ ಅರ್ಧ ಕಿಲೋಮೀಟರ್ ದೂರದಲ್ಲಿ, ಸ್ವಾಮೀಜಿಯವರು 56 ವರ್ಷಗಳಿಂದ ನೆಲೆಸಿದ್ದ ಶ್ರೀ ಗುರುದೇವರ ಮಠದ ಪಕ್ಕದಲ್ಲಿಯೇ ಮಾಡಲಾಗಿದೆ)

ಶ್ರೀ ವಿಮಲಾನಂದ ಸ್ವಾಮೀಜಿ

ಇತರ ಮಾಹಿತಿಗಳು